ನೀತಿ ಕೇಂದ್ರ

ಜಾಹೀರಾತು ನೀತಿಗಳು

Snapchat ಎನ್ನುವುದು ಒಂದು ಆ್ಯಪ್ ಆಗಿದ್ದು, ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದ ಹೊಂದಲು ಜನರಿಗೆ ಅವಕಾಶ ಕಲ್ಪಿಸುತ್ತದೆ. ಜನಪ್ರಿಯ, ಸುಂದರ ಅಥವಾ ಪರಿಪೂರ್ಣರಾಗುವ ಒತ್ತಡವಿಲ್ಲದೆ ನಿಮ್ಮ ಸ್ನೇಹಿತರೊಂದಿಗೆ ಮನೋಭಾವನೆಗಳ ಪೂರ್ಣ ಶ್ರೇಣಿಯನ್ನು ಸಂವಹನ ಮಾಡಲು ಇದು ಅತ್ಯಂತ ಸುಲಭ ಮತ್ತು ಅತ್ಯಂತ ವೇಗವಾದ ವಿಧಾನವಾಗಿದೆ.

ಆ ನೈಜತೆಯ ಸ್ಫೂರ್ತಿಯಲ್ಲಿ ಜಾಹೀರಾತುದಾರರು ತಮ್ಮ ಉತ್ಪನ್ನಗಳು, ಸೇವೆಗಳು ಮತ್ತು ಕಂಟೆಂಟ್ ಬಗ್ಗೆ ಪ್ರಾಮಾಣಿಕರಾಗಿರಬೇಕು, ನಮ್ಮ ವೈವಿಧ್ಯಮಯ ಸಮುದಾಯಕ್ಕೆ ವಿನಮ್ರರಾಗಿರಬೇಕು ಮತ್ತು Snapchatter ಗಳ ಗೌಪ್ಯತೆಯೊಂದಿಗೆ ಎಂದಿಗೂ ರಾಜಿಮಾಡಿಕೊಳ್ಳಬಾರದು ಎಂದು ನಾವು ನಿರೀಕ್ಷಿಸುತ್ತೇವೆ.

ಈ ಜಾಹೀರಾತು ನೀತಿಗಳು––ಯಾವುದೇ ಸೃಜನಶೀಲ ಅಂಶಗಳು, ಲ್ಯಾಂಡಿಂಗ್ ಪುಟ ಅಥವಾ ಸ್ವತಃ ಜಾಹೀರಾತುಗಳ ಯಾವುದೇ ಸಂಬಂಧಿಸಿದ ಘಟಕಗಳು ಸೇರಿದಂತೆ Snap ನಿಂದ ಒದಗಿಸಲಾಗುವ ಜಾಹೀರಾತುಗಳ ("ಜಾಹೀರಾತುಗಳು") ಎಲ್ಲ ಆಯಾಮಗಳಿಗೆ ಅನ್ವಯಿಸುತ್ತವೆ ––ಮತ್ತು ಎಲ್ಲ ಜಾಹೀರಾತುಗಳು ಪಾಲನೆ ಮಾಡುತ್ತವೆ ಎನ್ನುವುದನ್ನು ಖಚಿತಪಡಿಸಲು ನೀವು ಜವಾಬ್ದಾರರಾಗಿದ್ದೀರಿ.

ಜಾಹೀರಾತುದಾರರು Snap ನ ಸೇವೆಯ ನಿಯಮಗಳು ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಮತ್ತು ನಮ್ಮ ಸೇವೆಗಳ ಬಳಕೆಯನ್ನು ನಿಯಂತ್ರಿಸುವ ಇತರ ಎಲ್ಲ Snap ನೀತಿಗಳನ್ನು ಕೂಡ ಪಾಲನೆ ಮಾಡಬೇಕು. ಕಾಲಕಾಲಕ್ಕೆ ನಾವು ನಮ್ಮ ನಿಯಮಗಳು, ನೀತಿಗಳು ಮತ್ತು ಮಾರ್ಗಸೂಚಿಗಳನ್ನು ನವೀಕರಿಸಬಹುದು, ಹಾಗಾಗಿ ದಯವಿಟ್ಟು ಚೆಕ್ ಇನ್ ಮಾಡಿ ಅವುಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಸಮೀಕ್ಷಿಸಿ.

ಎಲ್ಲ ಜಾಹೀರಾತುಗಳು ನಮ್ಮ ವಿಮರ್ಶೆ ಮತ್ತು ಅನುಮೋದನೆಗೆ ಒಳಪಟ್ಟಿವೆ. ನಾವು ಗಂಭೀರವಾಗಿ ಪರಿಗಣಿಸುವ, ಬಳಕೆದಾರರ ಪ್ರತಿಕ್ರಿಯೆ ಸೇರಿದಂತೆ, ಯಾವುದೇ ಕಾರಣಕ್ಕಾಗಿ ನಮ್ಮ ಸ್ವಂತ ವಿವೇಚನೆ ಮೇರೆಗೆ ಯಾವುದೇ ಜಾಹೀರಾತನ್ನು ತಿರಸ್ಕರಿಸುವ ಅಥವಾ ತೆಗೆದುಹಾಕುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ಯಾವುದೇ ಜಾಹೀರಾತಿಗೆ ಮಾರ್ಪಾಡುಗಳನ್ನು ವಿನಂತಿಸುವ, ಒಂದು ಜಾಹೀರಾತಿನಲ್ಲಿ ಮಾಡಿದ ದಾವೆಗಳಿಗೆ ವಾಸ್ತವಿಕ ಪುರಾವೆಗಳನ್ನು ಒದಗಿಸುವಂತೆ ಕೋರುವ ಅಥವಾ ನಿಮ್ಮ ಜಾಹೀರಾತಿಗೆ ಸಂಬಂಧಿಸಿದಂತೆ ಅಗತ್ಯವಿರಬಹುದಾದ ಯಾವುದೇ ಪರವಾನಗಿ ಅಥವಾ ದೃಢೀಕರಣವನ್ನು ಸಾಬೀತುಪಡಿಸುವ ದಾಖಲೆಗಳನ್ನು ಕೋರುವ ಹಕ್ಕನ್ನು ಕೂಡ ನಾವು ಕಾಯ್ದಿರಿಸಿದ್ದೇವೆ.

ನಮ್ಮ ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ವ್ಯವಹಾರಗಳು ಅಥವಾ ವ್ಯಕ್ತಿಗಳ ಜೊತೆ ಸಂಬಂಧ ಹೊಂದಿರುವ ಖಾತೆಗಳನ್ನು Snap ಅಮಾನತುಗೊಳಿಸಬಹುದು ಅಥವಾ ಸಮಾಪ್ತಿಗೊಳಿಸಬಹುದು.

Snapchatter ಗಳು ಇತರರ ಜೊತೆ ಜಾಹೀರಾತುಗಳನ್ನು ಹಂಚಿಕೊಳ್ಳಬಹುದು ಅಥವಾ ತಮ್ಮ ಸಾಧನಗಳಿಗೆ ಜಾಹೀರಾತುಗಳನ್ನು ಉಳಿಸಬಹುದು. ಅವರು ಜಾಹೀರಾತುಗಳಿಗೆ ಶೀರ್ಷಿಕೆಗಳು, ರೇಖಾಚಿತ್ರಗಳು, ಫಿಲ್ಟರ್‌ಗಳು ಅಥವಾ ಇತರ ಸೃಜನಾತ್ಮಕ ಅಂಶಗಳನ್ನು ಅನ್ವಯಿಸುವುದಕ್ಕಾಗಿ Snapchat ನಲ್ಲಿ ನಾವು ಲಭ್ಯವಾಗಿಸುವ ಯಾವುದೇ ಉಪಕರಣಗಳು ಮತ್ತು ವೈಶಿಷ್ಟ್ಯಗಳನ್ನು ಬಳಸಬಹುದು ಅಥವಾ ಒಂದು ವೇಳೆ ನೀವು ಪ್ರೇಕ್ಷಕರ ಜಾಲದಲ್ಲಿ ಜಾಹೀರಾತುಗಳ ಪ್ರಸಾರ ಮಾಡುತ್ತಿದ್ದರೆ, ಜಾಹೀರಾತು ಪ್ರಸಾರವಾಗುವಲ್ಲಿ ಲಭ್ಯವಾಗಿಸಿರುವ ಯಾವುದೇ ಉಪಕರಣಗಳು ಮತ್ತು ವೈಶಿಷ್ಟ್ಯಗಳನ್ನು ಅವರು ಬಳಸಬಹುದು. ವಯಸ್ಸು ಆಧರಿಸಿ-ಗುರಿಯಾಗಿಸಿದ ಜಾಹೀರಾತುಗಳನ್ನು Snapchat ನೊಳಗೆ ಯಾವುದೇ ವಯಸ್ಸಿನ Snapchat ಬಳಕೆದಾರರೊಂದಿಗೆ ಹಂಚಿಕೊಳ್ಳಬಹುದು. Snapchat ಒಳಗೆ ನಿಮ್ಮ ಜಾಹೀರಾತುಗಳಿಗಾಗಿ ನೀವು ಜಾಹೀರಾತು ಹಂಚಿಕೊಳ್ಳುವಿಕೆಯನ್ನು ಮತ್ತು ಜಾಹೀರಾತು ಉಳಿಸಿಕೊಳ್ಳುವಿಕೆಯನ್ನು ನಿರ್ಬಂಧಿಸಬಹುದೇ ಎಂದು ಕಂಡುಕೊಳ್ಳಲು, ದಯವಿಟ್ಟು ನಿಮ್ಮ ಖಾತೆ ಪ್ರತಿನಿಧಿಯನ್ನು ಸಂಪರ್ಕಿಸಿ ಅಥವಾ ನಮ್ಮ ವ್ಯವಹಾರ ಸಹಾಯ ಕೇಂದ್ರಕ್ಕೆಭೇಟಿ ನೀಡಿ.

ನಾವು ಜಾಹೀರಾತುಗಳಿಗೆ (ಸೃಜನಶೀಲ, ಉದ್ದೇಶಿತ, ಪಾವತಿಸುವವರು, ಸಂಪರ್ಕ ಮಾಹಿತಿ ಮತ್ತು ಆ ಜಾಹೀರಾತುಗಳಿಗಾಗಿ ಪಾವತಿಸಿರುವ ಹಣ ಸೇರಿದಂತೆ)ಸಂಬಂಧಿಸಿದ ಮಾಹಿತಿಯನ್ನು ಪ್ರಕಟಿಸಬಹುದು ಅಥವಾ: (a) ಅವರಿಗೆ ಸಂಬಂಧಿಸಿದ ವಿಷಯದಲ್ಲಿ ನಿಮ್ಮ ಜಾಹೀರಾತುಗಳು ಪ್ರಸಾರವಾಗುವ ನಮ್ಮ ಮಾಧ್ಯಮ ಪಾಲುದಾರರು; ಮತ್ತು (b) ಜಾಹೀರಾತುಗಳಿಗೆ ಸಂಬಂಧಿಸಿದಂತೆ ನೀವು ಯಾವ ತೃತೀಯ ಪಕ್ಷಗಳ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸಲು ಆಯ್ಕೆ ಮಾಡಿದ್ದೀರೋ ಆ ತೃತೀಯ ಪಕ್ಷಗಳು ಒಳಗೊಂಡಂತೆ ತೃತೀಯ ಪಕ್ಷಗಳ��ಂದಿಗೆ ಆ ಮಾಹಿತಿಯನ್ನು ಹಂಚಿಕೊಳ್ಳಬಹುದು.

ನಾವು ನಮ್ಮ ಸೇವೆಯ ನಿಯಮಗಳಲ್ಲಿ ಹೇಳಿರುವಂತೆ, ತೃತೀಯ ಪಕ್ಷದಿಂದ ಕಾರ್ಯಾಚರಿಸಲ್ಪಡುವ ಮತ್ತು ನಮ್ಮ ಸೇವೆಗಳ ಮೂಲಕ ಲಭ್ಯವಾಗಿಸಿದ ಒಂದು ಸೇವೆ, ವೈಶಿಷ್ಟ್ಯ ಅಥವಾ ಕಾರ್ಯವೈಶಿಷ್ಟ್ಯವನ್ನು (ನಾವು ತೃತೀಯ ಪಕ್ಷದೊಂದಿಗೆ ಜಂಟಿಯಾಗಿ ಒದಗಿಸುವ ಸೇವೆಗಳು ಸೇರಿದಂತೆ) ನೀವು ಬಳಸಿದರೆ, ಪ್ರತಿ ಪಕ್ಷದ ನಿಯಮಗಳು ನಿಮ್ಮೊಂದಿಗೆ ಸಂಬಂಧಿತ ಪಕ್ಷದ ಸಂಬಂಧವನ್ನು ನಿಯಂತ್ರಿಸುತ್ತವೆ. ತೃತೀಯ ಪಕ್ಷದ ನಿಯಮಗಳು ಅಥವಾ ಕಾರ್ಯಗಳಿಗೆ Snap ಮತ್ತು ಅದರ ಅಂಗಸಂಸ್ಥೆಗಳು ಜವಾಬ್ದಾರವಾಗಿರುವುದಿಲ್ಲ.

ಮುಂದೆ:

ಸಾಮಾನ್ಯ ಅವಶ್ಯಕತೆಗಳು

Read Next